ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

ಈ ವೆಬ್ ಸೈಟ್ ಬಳಸುವ ಓದುಗರ ಮನದಲ್ಲಿ ಮೂಡುವ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಇನ್ನೂ ಏನಾದರೂ ಸಂದೇಹ ಇದ್ದರೆ ಮರೆಯದೇ ಕೆಳಗೆ ಕಮೆಂಟ್ ವಿಭಾಗದಲ್ಲಿ ಕೇಳಿ. ತಪ್ಪದೇ ಉತ್ತರ ಕೊಡುತ್ತೇವೆ.

ಈ ತಾಣದಲ್ಲಿ ಯಾವ ವಿಷಯಗಳ ಬಗ್ಗೆ ಬರೆಯುತ್ತೀರಾ?

ಗಣಕ ಎಂದರೆ ಲೆಕ್ಕಾಚಾರ ಅಂದರೆ ಕಂಪ್ಯೂಟಿಂಗ್ ಎಂದರ್ಥ. ಗಣಕ ಯಂತ್ರ ಎಂದರೆ ಕಂಪ್ಯೂಟರ್ ಎಂದರ್ಥ. ಲ್ಯಾಪ್ ಟಾಪ್, ಡೆಸ್ಕ್ ಟಾಪ್, ಸ್ಮಾರ್ಟ್ ಫೋನ್ ಎಲ್ಲವೂ ಗಣಕ ಯಂತ್ರಗಳೇ! ಅಷ್ಟೇ ಯಾಕೆ ಸ್ಮಾರ್ಟ್ ಟಿವಿ, ಸ್ಮಾರ್ಟ್ ಪ್ರಿಡ್ಜ್ ಅಂತಹ ಉಪಕರಣಗಳ ಒಳಗೆ ಕೂಡಾ ಕಂಪ್ಯೂಟರ್ ಇದೆ!

ಪುರಿ ಎಂದರೆ ಬರೀ ತಿನ್ನೋ ಪುರಿ ಅಲ್ಲ ಸಿಟಿ, ಪಟ್ಟಣ ಎಂಬರ್ಥ ಕೂಡಾ ಇದೆ!

ಗಣಕ ಪುರಿ ಎಂದರೆ ಕಂಪ್ಯೂಟರ್ ಸಿಟಿ ಎನ್ನಬಹುದು!

ಇಲ್ಲಿ ಕಂಪ್ಯೂಟರ್ ಗೆ ಸಂಬಂಧಿಸಿದ ಪ್ರಚಲಿತ, ಬೇಸಿಕ್ಸ್, ಪ್ರೋಗ್ರಾಮಿಂಗ್, ಟಿಪ್ಸ್, ಟ್ರಿಕ್ಸ್ ಮಾಹಿತಿಗಳು ಬರಲಿವೆ. ಕಂಪ್ಯೂಟರ್ ಬಗ್ಗೆ ನಿಮಗೆ ಆಸಕ್ತಿ ಇದ್ದರೆ ಅಥವಾ ಕಂಪ್ಯೂಟರ್ ಇಂಜಿನಿಯರ್ ಅಥವಾ ವಿದ್ಯಾರ್ಥಿ ಆಗಿದ್ದರೆ ತಪ್ಪದೇ ಈ ತಾಣ ಅನುಸರಿಸಿ.

ಈ ತಾಣವನ್ನು ಯಾರು ಬಳಸಬಹುದು?

ಯಾವುದೇ ಬೇಧ ಇಲ್ಲದೇ ಕನ್ನಡ ಬಲ್ಲ ಯಾರೇ ಆದರೂ ಮುಕ್ತ ವಾಗಿ ಈ ತಾಣ ಬಳಸಬಹುದು.

ನೆನಪಿಡಿ ಈ ತಾಣದಲ್ಲಿ ಲೇಖನಗಳು, ಉತ್ತರಗಳು ಬರಿ ಕನ್ನಡದಲ್ಲಿ ಮಾತ್ರ ಇರುತ್ತದೆ. ನೀವೂ ಸಹ ಸಾಧ್ಯವಿದ್ದಷ್ಟು ಕನ್ನಡ ಬಳಸಿ ಎಂಬುದು ನಮ್ಮ ವಿನಮ್ರ ಕೋರಿಕೆ.

ಈ ತಾಣದಲ್ಲಿರುವ ಲೇಖನ ನಕಲು ಮಾಡಬಹುದೇ?

ಈ ತಾಣದಲ್ಲಿರುವ ಪ್ರತಿ ಲೇಖನಗಳ ಹಿಂದೆ ಪರಿಶ್ರಮ ಇದೆ. ಇವುಗಳನ್ನು ಅನುಮತಿ ಇಲ್ಲದೇ ನಕಲು ಅಥವಾ ಮರು ಪ್ರಕಟಿಸುವಂತಿಲ್ಲ. ಆದರೆ ಲೇಖನದ ಲಿಂಕ್ ಅನ್ನು ಮುಕ್ತವಾಗಿ ಹಂಚಬಹುದು.

ಶಿಕ್ಷಣ, ಸಂಶೋಧನೆ, ಕಲಿಕೆಯ ವೈಯಕ್ತಿಕ ಬಳಕೆಗೆ ಇವುಗಳನ್ನು ಬಳಸುವದಕ್ಕೆ, ಉಲ್ಲೇಖಿಸಲು ಯಾವುದೇ ಅಭ್ಯಂತರ ಇಲ್ಲ. ಆದರೆ ಅನುಮತಿ ಇಲ್ಲದೇ ದೊಡ್ಡ ಮಟ್ಟದ ಪ್ರಸಾರವಿರುವ ಪತ್ರಿಕೆ, ಕೈಪಿಡಿಗಳಲ್ಲಿ ಅಚ್ಚು ಹಾಕಿಸಿ ಪ್ರಕಟಿಸುವಂತಿಲ್ಲ.

ಈ ತಾಣಕ್ಕೆ ಹಣ ಮಾಡುವ ಉದ್ದೇಶ ಇದೆಯೇ?

ಈ ತಾಣ ಜಾಹೀರಾತು ಹಾಗೂ ಅಫಿಲಿಯೇಟ್ ಲಿಂಕ್ ಮಾರ್ಗದ ಮೂಲಕ ಹಣ ಸಂಗ್ರಹಿಸಲು ಪ್ರಯತ್ನಿಸುತ್ತದೆ. 

ಆದರೆ ಯಾವುದೇ ಕಾರಣಕ್ಕೆ ವಿಷಯವನ್ನು ಬರೆಯುವಾಗ ಇವುಗಳನ್ನು ಗಮನದಲ್ಲಿಟ್ಟು ಬರೆಯುವದಿಲ್ಲ. ಅಂದರೆ ಜನರ ಕೊಳ್ಳುವಿಕೆಯ ಪ್ರಚೋದಿಸುವ, ಮರುಳು ಮಾಡುವ ಮಾರ್ಕೆಟಿಂಗ್ ವಿಧಾನವನ್ನು ಗಣಕ ಪುರಿ ಅನುಸರಿಸುವದಿಲ್ಲ. ಅಂದರೆ ಹಣ ಗಳಿಕೆ ಈ ತಾಣದ ಮುಖ್ಯ ಗುರಿ ಅಲ್ಲ.

ಇಂದು ಡೋಮೇನ್ ಹೆಸರಿನಿಂದ ಹಿಡಿದು ವೆಬ್ ಸೈಟ್ ಥೀಮ್, ಸರ್ವರ್ ಹೋಸ್ಟಿಂಗ್ ವರೆಗೆ ಎಲ್ಲಕ್ಕೂ ಹಣ ಸಂದಾಯ ಮಾಡಲೇ ಬೇಕು. ಹಣ ನೀಡದ ಮರುದಿನ ಸೇವೆ ನಿಲ್ಲಿಸುತ್ತಾರೆ. ಟ್ರಾಫಿಕ್ ಕಮ್ಮಿ ಇರುವಾಗ ಸುಮ್ಮನಿರುವ ಉಚಿತ ಹೋಸ್ಟಿಂಗ್ ಸೇವೆಗಳು ವೆಬ್ ತಾಣದ ಗಾತ್ರ, ಬ್ಯಾಂಡ್ ವಿಡ್ತ್ ಜಾಸ್ತಿ ಬಳಕೆ ಆದಾಗ ನಿಯಮ ನಿಬಂಧನೆಗಳನ್ನು ಮುಂದಕ್ಕೆ ಒಡ್ಡಿ ತಾಣವನ್ನು ಮುಚ್ಚಿ ಹಾಕುತ್ತವೆ.

ಅಷ್ಟೇ ಅಲ್ಲ ಉತ್ತಮ ಕಂಟೆಂಟ್ ನೀಡಲು ಸಹ ಅದರ ಹಿಂದೆ ಪರಿಶ್ರಮ ಬೇಕು. ಕೆಲವೊಮ್ಮೆ ಹಣ ನೀಡಿ ಸೇವೆ ಪಡೆಯಬೇಕು. 

ಒಟ್ಟಿನಲ್ಲಿ ಈ ತಾಣ ಆರ್ಥಿಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಬೆಳೆಯುವ ಉದ್ದೇಶ ಹೊಂದಿದೆ. ಆದರೆ ಎಲ್ಲ ಬಳಕೆದಾರರಿಗೆ ಎಲ್ಲ ಜ್ಞಾನ, ಮಾಹಿತಿ ಸಂಪೂರ್ಣ ಉಚಿತ ಆಗಿರುತ್ತದೆ.

ಆದರೆ ಯಾವುದೇ ಕಾರಣಕ್ಕೂ ವಿಸ್ಮಯನಗರಿ.ಕಾಂ ಹಾಗೂ ಉಪ ತಾಣಗಳು ಯಾರ ಬಳಿಯೂ ಒಂದೇ ಒಂದು ಪೈಸೆಯನ್ನು ಸಹ ದಾನ ಕೊಡುವಂತೆ ಇದುವರೆಗೂ ಕೇಳಿಲ್ಲ. ಮುಂದೆಯೂ ಕೇಳುವದಿಲ್ಲ. ಹಾಗೆ ಯಾರಾದರೂ ಮೋಸ ಮಾಡಲು ಪ್ರಯತ್ನಿಸಿದರೆ ತಕ್ಷಣ ಮೋಸವಾಗದಂತೆ ಎಚ್ಚೆತ್ತು ಕೊಂಡು  ನಿರಾಕರಿಸಿ. ನಮ್ಮ ಗಮನಕ್ಕೆ ತಂದರೆ ಕಾನೂನು ಕ್ರಮ ಕೈಗೊಳ್ಳಲಾಗುವದು.


--ಗಣಕಪುರಿ.ಕಾಂ

ಸೂಚನೆ: ಗಣಕಪುರಿ.ಕಾಂ, ಪದಮಂಜರಿ.ಕಾಂ, ವಿಸ್ಮಯಪುರಿ.ಕಾಂ ಇದು ವಿಸ್ಮಯನಗರಿ.ಕಾಂ ಅವರ ಟ್ರೇಡ್ ಮಾರ್ಕ್ ಆಗಿದೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ